ಕೂಡಲಸಂಗಮದಲ್ಲಿಯೇ ಮೂಲ ಪೀಠ ಇಟ್ಟುಕೊಂಡು ಉಳಿದೆಡೆ ಭಕ್ತರು ಹೇಳಿದಲ್ಲಿ ಶಾಖಾ ಪೀಠಗಳನ್ನು ಸ್ಥಾಪನೆ ಮಾಡುತ್ತೇವೆಂದು ಪಂಚಮಸಾಲಿ ಪೀಠದ ಉಚ್ಛಾಟಿತ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.ಕೂಡಲಸಂಗಮದಲ್ಲಿ ಮಾತನಾಡಿರುವ ಅವರು, ಭಕ್ತರು ಯಾರೂ ವಿಚಲಿತರಾಗಬಾರದೆಂದು ಕರೆ ನೀಡಿದ್ದಾರೆ.ಮುಂಬರುವ ದಿನಗಳಲ್ಲಿ ಸಮಾಜದ ನಾಯಕರ, ಗಣ್ಯರ,ಭಕ್ತರ ಬೃಹತ್ ಸಭೆಯನ್ನ ಕರೆದು ಕೂಲಂಕುಷವಾಗಿ ಚರ್ಚಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ.ಭಕ್ತರು ಭಕ್ತಿಯ ಮೂಲಕ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆಂದು ಹೇಳಿದ್ದಾರೆ.