ಕೆಆರ್'ಎಸ್ ಜಲಾಶಯದ ನೀರಿನ ಮಟ್ಟ ಒಂದಡಿ ಇಳಿಕೆಯಾಗಿದ್ದು, ಹೊರಹರಿವು ಹೆಚ್ಚಳ ಮಾಡಲಾಗಿದೆ. ಈ ಕುರಿತು ಶುಕ್ರವಾರ ರಾತ್ರಿ ಕಾನೀನಿದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಲಾಶಯಕ್ಕೆ 23913 ಕ್ಯೂಸೆಕ್ ಒಳಹರಿವಿದ್ದು, ಜಲಾಶಯದಿಂದ ನದಿ, ನಾಲೆ ಹಾಗೂ ಕುಡಿಯುವ ನೀರಿಗಾಗಿ 25290 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ ಪೈಕಿ 123.90 ಅಡಿ ನೀರಿನ ಸಂಗ್ರಹವಿದೆ. ಅಂತೆ ಗರಿಷ್ಠ ನೀರಿನ ಪ್ರಮಾಣ 49.452 ಟಿಎಂಸಿ ಪೈಕಿ 48.199 ಟಿಎಂಸಿ ಸಂಗ್ರಹವಿದ್ದು, ಅದರಲ್ಲಿ ಬಳಕೆಗೆ ಯೋಗ್ಯವಾದ 38.820 ಟಿಎಂಸಿ ನೀರಿನ ಸಂಗ್ರಹವಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.