ಮೈಸೂರು ನಾಡ ಹಬ್ಬ ದಸರಾ ಅಂತಾರಾಷ್ಟ್ರೀಯ ಹಬ್ಬವಾಗಿ ಪರಿವರ್ತನೆಯಾಗಿದೆ. ನೂರಾರು ವರ್ಷಗಳ ಪರಂಪರೆ ಇದೆ ಎಂದು ಮೇಘಾಲಯ ರಾಜ್ಯಪಾಲ ಸಿ. ಹೆಚ್. ವಿಜಯಶಂಕರ್ ಹೇಳಿದರು. ತುಮಕೂರು ನಗರದಲ್ಲಿ ಆಗಸ್ಟ್ 30 ರಂದು ಬೆಳಿಗ್ಗೆ 10.30 ಗಂಟಿಗೆ ನಡೆಯಲಿರುವ ಆಪರೇಷನ್ ಸಿಂಧೂರ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟನೆ ನೆರವೇರಸಲಿರುವ ಅವರು ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಂಜೆ 6.50 ರ ಸಮಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮೈಸೂರು ದಸರಾಗೆ ದೈವಿಕ ಹಿನ್ನಲೆ ಅಷ್ಟೇ ಅಲ್ಲದೆ ನಾಡಿನ ಕಲೆ ಸಾಹಿತ್ಯ, ಸಂಸ್ಕೃತಿಯನ್ನ ಹೇಗೆ ಉಳಿಸಿ ಬೆಳಸಬೇಕು ಎನ್ನುವುದನ್ನ ನಾಡ ಹಬ್ಬದ ಮೂಲಕ ತಿಳಿಸಲಾಗುತ್ತಿದೆ ಎಂದರು.