ರತಿಕಾ ನೃತ್ಯ ನಿಕೇತನದ ೩೦ನೇ ವರ್ಷಾಚರಣೆ ನಿಮಿತ್ತ ಗುರು ಅಭಿವಂದನೆ ಹಾಗೂ ನೃತ್ಯೋತ್ಸವ ಸೆಪ್ಟೆಂಬರ್ ೭ರಂದು ಸಂಜೆ ೫ ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿದುಷಿ ನಾಗರತ್ನಾ ಹಡಗಲಿ ತಿಳಿಸಿದರು. ನಗರದಲ್ಲಿ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮವನ್ನು ಹಿರಿಯ ಗಾಯಕ ಪಂ.ಎಂ. ವೆಂಕಟೇ