ಚಳ್ಳಕೆರೆ:- ನಾಯಕನಹಟ್ಟಿ ಸಮೀಪದ ದೊರೆಗಳ ಮಟ್ಟಿಗೆ ಮಾಜಿ ಶಾಸಕ ತಿಪ್ಪೇಸ್ವಾಮಿ ಮಂಗಳವಾರ ಸಂಜೆ 4 ಗಂಟೆಗೆ ಭೇಟಿ ನೀಡಿದ್ದಾರೆ. ಹಟ್ಟಿ ಮಲ್ಲಪ್ಪ ನಾಯಕನ ಸ್ಮಾರಕವನ್ನು ಅಭಿವೃದ್ಧಿಪಡಿಸಬೇಕು, ಈ ವರ್ಷದಿಂದಲೇ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಆರಂಭ ಮಾಡಲಾಗಿದೆ, ಹಟ್ಟಿ ಮಲ್ಲಪ್ಪ ನಾಯಕನಹಟ್ಟಿ ಪ್ರಾಂತ್ಯವನ್ನು ಆಳ್ವಿಕೆ ಮಾಡಿದ ರಾಜವಂಶಸ್ಥ ಆದರೆ ಅಂದಿನ ರಾಜನಾಗಿ ಆಳ್ವಿಕೆ ಮಾಡಿದ ಹಟ್ಟಿ ಮಲ್ಲಪ್ಪ ನಾಯಕನ ಸ್ಮಾರಕ ಅಭಿವೃದ್ಧಿಯಾಗದೆ ವಿನಾಶದತ್ತ ಆಗುತ್ತಿದೆ ಪ್ರತಿಯೊಬ್ಬರು ನಾಯಕ ಸಮುದಾಯದವರು ಕೈಜೋಡಿಸುವ ಮೂಲಕ ಸ್ಮಾರಕವನ್ನು ಅಭಿವೃದ್ಧಿಗೊಳಿಸಬೇಕು ಎಂದು ಕರೆ ನೀಡಿದರು.