ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಕಳ್ಳರು , ಬೀಗ ಹಾಕಿದ್ದ ಗೇಟ್ನಿಂದ ಜಂಪ್ ಮಾಡಿ ಮನೆ ಬಾಗಿಲ ಬೀಗ ಮರಿದು 2.5 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತು ಕಳ್ಳತನ ಮಾಡಲಾಗಿರುವ ಘಟನೆ ಪಟ್ಟಣದ ಹಿರಿಮಠ ಕಾಲೋನಿಯಲ್ಲಿ ಭಾನುವಾರ ಬೆಳಗಿನ ಜಾವ 3ಗಂಟೆ ಆಸು ಪಾಸು ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಕಳ್ಳತನ ಆಗಿರುವ ಸ್ವತ್ತು ಪಟ್ಟಣದ ಜೆಸ್ಕಾಂ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿರುವ ರಮೇಶ್ ಗಣಪತಿ ಅವರಿಗೆ ಸೇರಿದೆಂದು ಎಂದು ತಿಳಿದುಬಂದಿದೆ.