ನಗರದಲ್ಲಿ ಸ್ಕೂಟಿಯ ಸೀಟ್ ಕೆಳಗೆ ಅಡಗೆ ಕುಳಿತಿದ್ದ ನಾಗರ ಹಾವು: ರಕ್ಷಣೆ ದಾವಣಗೆರೆ ನಗರದ ಡಿಸಿಎಂ ಟೌನ್ ಶಿಪ್'ನಲ್ಲಿ ಸ್ಕೂಟಿಯ ಸೀಟ್ ಕೆಳಗೆ ಅಡಗಿ ಕುಳಿತಿದ್ದ ನಾಗರ ಹಾವನ್ನು ಹಾವು ರಕ್ಷಕ ಬಸವರಾಜ್ ಅವರು ರಕ್ಷಣೆ ಮಾಡಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಡಿಸಿಎಂ ಟೌನ್ ಶಿಪ್ ನ 6ನೇ ಮೇನ್ 2 ನೇ ಕ್ರಾಸ್ ನಲ್ಲಿ ವಾಸವಿರುವ ಸುನೀತಾ ಎಂಬುವವರ ಸ್ಕೂಟಿಯ ಸೀಟ್ ಕೆಳಗೆ ನಾಗರ ಹಾವು ಅಡಗಿ ಕುಳಿತಿತ್ತು. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಇದನ್ನು ಗಮನಿಸಿದ ಕೂಡಲೇ ಹಾವು ರಕ್ಷಕ ಬಸವರಾಜ್ ಅವರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಬಸವರಾಜ್ ಹಾವನ್ನು ರಕ್ಷಣೆ ಮಾಡಿ ಚೀಲದಲ್ಲಿ ಕೊಂಡೊಯ್ದು ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.