ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಆನಂದಪೂರ ಗ್ರಾಮದಲ್ಲಿರುವ ಶ್ರೀ ಬನಶಂಕರಿ ವಿದ್ಯುತ್ ಚಾಲಿತ ಮಗ್ಗಗಳ ಔದ್ಯೋಗಿಕ ಸಹಕಾರಿ ಸಂಘ (ನಿ.), ಯಮಕನಮರಡಿ-ಆನಂದಪೂರ ಸಂಘದ ನೇಕಾರ ಕಾಲೋನಿ ಹಾಗೂ ನೂತನವಾಗಿ ನಿರ್ಮಿತವಾದ ಶ್ರೀ ದೇವಾಂಗ ಬನಶಂಕರಿ ಮಂಗಳ ಕಾರ್ಯಾಲಯವನ್ನು ಇಂದು ಶನಿವಾರ 4 ಗಂಟೆಗೆ ಸಚಿವ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿ, ಜವಳಿ ಖಾತೆಯ ಸಚಿವನಾಗಿದ್ದಾಗ ನೇಕಾರ ಸಮಾಜದ ಹಿತಕ್ಕಾಗಿ ಕೈಗೊಂಡ ಕ್ರಮಗಳನ್ನು ಸ್ಮರಿಸಿಕೊಂಡು.ಆ ಅವಧಿಯಲ್ಲಿ, ಕಷ್ಟದಲ್ಲಿದ್ದ ನೇಕಾರರಿಗೆ ವಿದ್ಯುತ್ ದರ ಕಡಿತಗೊಳಿಸುವ ಉದ್ದೇಶದಿಂದ ಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದೆ. ಆಗ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಅವರ ಸಹಕಾರದಿಂದ ವಿದ್ಯುತ್ ದರ ಇಳಿಕೆ ಸಾಧ್ಯವಾಯಿತು ಎಂದರು.