ಹನೂರು ಪಟ್ಟಣದ 7ನೇ ವಾರ್ಡ್, ಗಾಣಿಗರ ಬೀದಿಯ ನಿವಾಸಿಯಾಗಿರುವ 11 ವರ್ಷದ ಬಾಲಕಿ ಮನೆಯಲ್ಲಿಯೇ ತಾಯಿಯೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಕೋಪಗೊಂಡು ಮನೆಯಿಂದ ಶಾಲಾ ಸಮವಸ್ತ್ರದಲ್ಲಿಯೇ ಬಟ್ಟೆ ಮತ್ತು ಆಧಾರ್ ಕಾರ್ಡ್ ಸಹಿತ ನಾಪತ್ತೆಯಾಗಿದ್ದಳು. ತಾಯಿ ಜ್ಯೋತಿ ಹನೂರು ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಂತೆಯೇ, ಪೊಲೀಸರು ತಕ್ಷಣ ಕ್ರಮ ಕೈಗೊಂಡು 12 ಗಂಟೆಯೊಳಗೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯನ್ನು ಹನೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಿ. ಆನಂದಮೂರ್ತಿ ನೇತ್ರತ್ವದಲ್ಲಿ ವಿಶೇಷ ತಂಡ ರಚನೆಯ ಮೂಲಕ ಗಂಭೀರವಾಗಿ ಕೈಗೆತ್ತಿಕೊಳ್ಳಲಾಗಿತ್ತು. ಬಾಲಕಿ ಅಪ್ರಾಪ್ತೆಯಾಗಿದ್ದರಿಂದ ಸ್ವತಃ ಇನ್ಸ್ಪೆಕ್ಟರ್ ಆನಂದಮೂರ್ತಿಯವರು ನೇರವಾಗಿ ತನಿಖೆಯಲ್ಲಿ ತೊಡಗಿಸಿಕೊಂಡರು.