ಬೈಕ್ ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಕುಣಿಗಲ್ ಪಟ್ಟಣದ ಅಗ್ರಹಾರ ಬಳಿ ನಡೆದಿದೆ. ಈ ಅಪಘಾತ ಗುರುವಾರ ಸಂಜೆ 4 ರ ಸಮಯದಲ್ಲಿ ನಡೆದಿದೆ. ಯಡಿಯೂರು ಹೋಬಳಿ ಕಟ್ಟಿಗೆಹಳ್ಳಿ ಗ್ರಾಮದ 43 ವರ್ಷದ ಲಕ್ಷ್ಮಿ ನರಸಿಂಹಮೂರ್ತಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಲಕ್ಷ್ಮಿ ನಾರಾಯಣಮೂರ್ತಿ ಅವರ ಪತ್ನಿ 39 ವರ್ಷದ ವಸಂತ ಅವರು ಗಾಯಗೊಂಡು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಜಾಜಿನಗರದ ಇ ಎಸ್ ಐ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಖಾಲಿ ಜಾಗದಿಂದ ಮಣ್ಣು ತುಂಬಿಕೊಂಡು ರಸ್ತೆಗೆ ಬಂದ ಟಿಪ್ಪರ್ ಬೈಕ್ ಗೆ ಡಿಕ್ಕಿ ಹೊಡೆದಿದೆ.