ದಾಂಡೇಲಿ : ಸ್ಥಳೀಯ ಕೋಗಿಲಬನದಲ್ಲಿರುವ ಶ್ರೀ ಮೃತ್ಯುಂಜಯ ಮಠದ ಶ್ರೀ ಮೃತ್ಯುಂಜಯ ಸಭಾಭವನದಲ್ಲಿ ಶ್ರೀ ವೀರಶೈವ ಸೇವಾ ಸಂಘ ಸಮಿತಿಯ ಆಶ್ರಯದಡಿ ಹಮ್ಮಿಕೊಳ್ಳಲಾಗಿದ್ದ ಶ್ರಾವಣ ಮಾಸದ ಶಿವಶರಣರ ಜ್ಞಾನಾಮೃತ ದಾಸೋಹ ಕಾರ್ಯಕ್ರಮದ ಮಹಾ ಮಂಗಳ ಸಮಾರಂಭವು ಇಂದು ಭಾನುವಾರ ಮಧ್ಯಾಹ್ನ ಎರಡೂವರೆ ಗಂಟೆ ಸುಮಾರಿಗೆ ಸಂಪನ್ನಗೊಂಡಿತು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಇಟಗಿಯ ಹಿರೇಮಠ ಸಂಸ್ಥಾನ ಪುಣ್ಯಕ್ಷೇತ್ರದ ಪರಮಪೂಜ್ಯ ಶಿವಾಚಾರ್ಯ ಮಹಾಸ್ವಾಮಿಗಳವರು ಎಲ್ಲವನ್ನು ತಿಳಿದಿರುವುದರಿಂದ ನಾವು ಮನುಜರಾಗಿದ್ದೇವೆ. ಮಾನವ ಜನ್ಮ ಅತ್ಯಂತ ಶ್ರೇಷ್ಠವಾದದ್ದಾಗಿದೆ ಎಂದರು.