ಶಾಲಾ ಶಿಕ್ಷಣ ಸರ್ಕಾರಿ ಪದವಿ ಪೂರ್ವ ಕಾಲೇಜು, ಹುಮ್ನಾಬಾದ್ ಹಾಗೂ ಸರ್ವೋದಯ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜು ಸಯುಕ್ತ ಆಶ್ರಯದಲ್ಲಿ ತಾಲೂಕಿನ ಮಾಣಿಕ ನಗರದ ಮಾಣಿಕ್ ಪ್ರಭು ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 9ರಂದು ಬೆಳಗ್ಗೆ 10ಕ್ಕೆ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಲಿದೆ ಎಂದು ಕ್ರೀಡಾಕೂಟ ಆಯೋಜನೆ ಪ್ರಮುಖ ಸರ್ವೋದಯ ಕಾಲೇಜು ಪ್ರಾಚಾರ್ಯ ಶಾಂತವೀರ್ ಯಲಾಲ್ ಸೋಮವಾರ ಸಂಜೆ 6ಕ್ಕೆ ತಿಳಿಸಿದ್ದಾರೆ..