ಕಲಬುರಗಿ : ಕಲಬುರಗಿ ನಗರದ ಹೀರಾಪುರ ಬಡಾವಣೆಯಲ್ಲಿ ಯುವಕ ಮರೆಪ್ಪ ಕಟ್ಟಿಮನಿಯನ್ನ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. ಆ26 ರಂದು ಬೆಳಗ್ಗೆ 11.30 ಕ್ಕೆ ಮಾಹಿತಿ ಲಭ್ಯವಾಗಿದೆ. ಯುವತಿ ವಿಚಾರಕ್ಕೆ ಸಂಬಂಧಿಸಿದಂತೆ ಪವನ್ ಮತ್ತು ಸಂಜು ಅಲಿಯಾಸ್ ಕರಿಯಾ ಸೇರಿಕೊಂಡು ಮರೆಪ್ಪನನ್ನ ಕೊಲೆ ಮಾಡಿದಾರೆಂದು ಕುಟುಂಬಸ್ಥರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.. ಹೀರಾಪುರ ಬಡಾವಣೆಯ ಸ್ಮಶಾನದಲ್ಲಿ ಮರೆಪ್ಪನನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು..