ಸಂಚಾರಕ್ಕೆ ಮುಕ್ತಗೊಂಡ ವರ್ಷಕ್ಕೂ ಮುನ್ನವೇ ಉತ್ತಂಬಳ್ಳಿ ಮೇಲ್ಸೇತುವೆ ಕುಸಿದಿದ್ದು ಇದು ಕಳಪೆ ಕಾಮಗಾರಿಯಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. ಕೊಳ್ಳೇಗಾಲ ತಾಲೂಕಿನ ಉತ್ತಂಬಳ್ಳಿ ಮೇಲ್ಸೇತುವೆ ಕುಸಿತ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿ, ಬಹು ವರ್ಷದ ಕನಸು ನನಸಾಯಿತು ಎಂದುಕೊಂಡಿದ್ದೆವು. ಆದರೆ, ಕಾಮಗಾರಿ ಕಳಪೆಯಿಂದ ಕೂಡಿದ್ದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಈ ರಸ್ತೆ ಕಾಮಗಾರಿ ಒಳಪಟ್ಟಿದೆ ಎಂದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಸ್ತೆ ಗುಣಮಟ್ಟವನ್ನು ಪರಿಶೀಲಿಸಿ ಗುತ್ತಿಗೆದಾರನಿಗೆ ಹಣ ಕೊಡಬೇಕು. ಜೊತೆಗೆ, ಸೇತುವೆಯ ಮರು ಕಾಮಗಾರಿ ಆಗಬೇಕು ಎಂದು ಒತ್ತಾಯಿಸಿದರು.