ಕಲಬುರಗಿ : ಅನ್ಯಜಾತಿಯ ಯುವಕನನ್ನ ಪ್ರೀತಿಸಿದ್ದಕ್ಕೆ ಮರ್ಯಾದೆಗೆ ಹೆದರಿ ಹೆತ್ತ ಮಗಳನ್ನೆ ತಂದೆಯೇ ಕೊಲೆ ಮಾಡಿದ ಘಟನೆ ಕಲಬುರಗಿ ತಾಲೂಕಿನ ಮೇಳಕುಂದಾ ಗ್ರಾಮದಲ್ಲಿ ನಡೆದಿದ್ದು, ಆ29 ರಂದು ರಾತ್ರಿ 10 ಗಂಟೆಗೆ ಮಾಹಿತಿ ಲಭ್ಯವಾಗಿದೆ.. 18 ವರ್ಷದ ಯುವತಿ ಕವಿತಾ ಅನ್ಯ ಜಾತಿಯ ಯುವಕನನ್ನ ಪ್ರೀತಿ ಮಾಡ್ತಿದ್ದಳು. ಈ ವಿಚಾರ ತಂದೆ ಶಂಕರ್ ಕೊಳ್ಳೊರಗೆ ಗೋತ್ತಾಗಿದ್ದು, ಪ್ರೀತಿಸಿದ ಯುವಕನ ಬಿಡಲ್ಲ ಅಂದಿದ್ದಕ್ಕೆ, ಹೆತ್ತ ಮಗಳನ್ನೆ ಕೊಲೆ ಮಾಡಿ ಸಾಕ್ಷಿ ನಾಶಕ್ಕಾಗಿ ಶವವನ್ನ ಸುಟ್ಟು ಹಾಕಿದ್ದಾನೆ.. ಈ ಬಗ್ಗೆ ಫರಹತ್ತಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..