Download Now Banner

This browser does not support the video element.

ರಾಯಚೂರು: ಕೃಷ್ಣಗಿರಿ ಹಿಲ್ಸ್‌ ಕೆರೆಯಲ್ಲಿ ಬಾಲಕ ಕಾಲು ಜಾರಿ ಬಿದ್ದ ಶಂಕೆ; ಮೃತದೇಹ ಪತ್ತೆ

Raichur, Raichur | Sep 6, 2025
ವಾಲಿಬಾಲ್ ಆಟವಾಡಲು ತೆರಳಿದಾಗ ಕಾಲು ಜಾರಿ ಕೆರೆಗೆ ಬಿದ್ದು ಬಾಲಕ ಸಾವನ್ನಪ್ಪಿದ ಘಟನೆ ರಾಯಚೂರಿನ ಕೃಷ್ಣಗಿರಿ ಹಿಲ್ಸ್ ನಲ್ಲಿ ಸೆ.5 ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಸಂಭವಿಸಿದೆ. ಮೃತ ಬಾಲಕನನ್ನು ಗೌತಮ್ ( 15 ) ಎಂದು ಹೇಳಲಾಗಿದೆ. ಸ್ನೇಹಿತನ ಜೊತೆಗೆ ಕೃಷ್ಣ ಗಿರಿ ಹಿಲ್ಸ್ ಗೆ ವಾಲಿಬಾಲ್ ಆಡಲು ತೆರಳಿದ್ದ. ಅಲ್ಲಿಯೇ ಇರುವ ಕೆರೆಯಲ್ಲಿ ಕಾಲು ಜಾರಿ ಬಿದ್ದಿದ್ದ ಎನ್ನಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಪೊಲೀಸರ ತಂಡ ಶೋಧ ಕಾರ್ಯ ನಡೆಸಿ ಸಂಜೆ 5 ಗಂಟೆಗೆ ಬಾಲಕನ ಶವ ಹೊರ ತೆಗೆದಿದ್ದಾರೆ‌. ಮೃತನ ಪೊಷಕರು ಮೂಲತಃ ರಾಜಸ್ಥಾನದವರು ತಂದೆ ತಳ್ಳುವ ಬಂಡಿಯಲ್ಲಿ ಇಡ್ಲಿ ಮಾರಾಟ ಮಾಡುತ್ತ ಜೀವನ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ರಾಯಚೂರಿನ ಯರಗೇರಾ ಮತ್ತು ಪಶ್ಚಿಮ ಪೊಲೀಸ್ ಠಾಣಾ ಗಡಿ
Read More News
T & CPrivacy PolicyContact Us