ಚಿರತೆ, ಹುಲಿ ಉಪಟಳಕ್ಕೆ ಬೇಸತ್ತು ಅರಣ್ಯ ಸಿಬ್ಬಂದಿಯನ್ನು ಬೋನಲ್ಲಿ ದಿಗ್ಬಂಧಿಸಿದ ಬೊಮ್ಮಲಾಪುರ ಘಟನೆಗೆ ಸಂಬಂಧಿಸಿದಂತೆ ರೈತರ ಮೇಲೆ ಎಫ್ಐಆರ್ ಹಾಕಿರುವುದಕ್ಕೆ ರೈತ ಸಂಘ ತೀವ್ರ ಆಕ್ರೋಶ ಹೊರಹಾಕಿದೆ. ಗುಂಡ್ಲುಪೇಟೆಯಲ್ಲಿ ರೈತ ಮುಖಂಡ ಡಾ.ಗುರುಪ್ರಸಾದ್ ಮಾತನಾಡಿ, ಹುಲಿ ಓಡಾಟವಿದೆ ಎಂದೂ ಹೇಳಿದರೂ ಸ್ಪಂದಿಸದೇ ನಿರ್ಲಕ್ಷ್ಯ ತೋರಿದ್ದಕ್ಕೆ ಲಾಕ್ ಮಾಡಿದ್ದಾರೆ. ರೈತರು ಯಾರಾ ಜೀವಹಾನಿ ಮಾಡಿಲ್ಲ, ಬೆದರಿಕೆ ಹಾಕಿಲ್ಲ ಸುಳ್ಳು ಕೇಸ್ ಹಾಕಿ ರೈತರನ್ನು ಸುಮ್ಮನಿರಿಸುತ್ತೇವೆ ಎಂದುಕೊಂಡಿದ್ದರೇ ರೈತರು ಬಗ್ಗಲ್ಲ ಎಂದು ಕಿಡಿಕಾರಿದ್ದಾರೆ. ದೂರು ಕೊಟ್ಟ ತಕ್ಷಣ ಪೊಲೀಸರು ಎಫ್ಐಆರ್ ಹಾಕಿರುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.