ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನ ಮುಂಡರಗಿ ಗ್ರಾಮದ ಆರಾಧ್ಯ ದೈವ ಶಿವ ರಾಯನ ಜಾತ್ರೆಯಲ್ಲಿ ದೇವಸ್ಥಾನದ ತಾತನವರ ದೇವರ ಕಾರಣಿಕ ಹೇಳಿಕೆ ರೈತರಲ್ಲಿ ಹರ್ಷ ಮೂಡಿಸಿದೆ. ಪ್ರತಿವರ್ಷವೂ ಶಿವ ರಾಯನ ಜಾತ್ರೆಯಲ್ಲಿ ಮುಂದಿನ ಆಗುಹೋಗುಗಳ ಕುರಿತು ಕಾರಣಿಕ ಹೇಳಿಕೆಯನ್ನು ನೀಡಲಾಗುತ್ತಿದ್ದು, ಅದರಂತೆ ಈ ವರ್ಷದ ಜಾತ್ರೆಯ ಅಂಗವಾಗಿ ದೇವರ ಕಾರಣಿಕ ಹೇಳಿಕೆಯನ್ನು ದೇವಸ್ಥಾನದ ತಾತನವರು ಎರಡು ಕಾರ್ತಿ ಮಳೆ ಬಸವಣ್ಣ ಕಾಲು ಕೆದರ್ಯಾನ ಎನ್ನುವ ನಿಗೂಢಾರ್ಥದ ಹೇಳಿಕೆ ಹೇಳುತ್ತಿದ್ದಂತೆ ನಾಡಿಗೆ ಉತ್ತಮ ಮಳೆ ಬೆಳೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಮುಂಡರಗಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನ ಭಕ್ತರು ಭಾಗವಹಿಸಿದ್ದರು.