ಕೊಲೆ ಮಾಡಿದ ಅಪರಾಧಿಗೆ ರಾಯಚೂರಿನ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕಲಂ 504, 506 ಮತ್ತು 302 ಆಫ್ ಐಪಿಸಿ ಅಡಿಯಲ್ಲಿ ಆರೋಪಿ ಬೂದೆಪ್ಪ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಹೊಲ ಸ್ವಚ್ಛ ಮಾಡಿ ಸಾಗುವಳಿ ಮಾಡಿದ್ದು ಸ್ವಚ್ಛ ಮಾಡಿದ ಕೂಲಿ ಹಣ ವ್ಯತ್ಯಾಸವಾಗಿ ಇಬ್ಬರ ನಡುವೆ ಜಗಳವಾಗಿ ಆ ಸಮಯದಲ್ಲಿ ಆರೋಪಿತನು ದ್ವೇಷ ಸಾಧಿಸುತ್ತ 2017ರಂದು ಕೆ ಬಸವ ಎಂಬಾತನ ಹೊಟ್ಟೆಗೆ ಚಾಕು ಚುಚ್ಚಿದಾಗ ರಕ್ತ ಸ್ರಾವವಾಗಿ, ಮೃತಪಟ್ಟಿದ್ದಾನೆ ಎಂದ ರಮೇಶ ಎಂಬುವರು ಸಲ್ಲಿಸಿದ ದೂರು ಆಧರಿಸಿ ಸಿರವಾರ ಪೊಲೀಸ್ ಠಾಣೆಯ ಆರಕ್ಷಕರು ಪ್ರಕರಣ ದಾಖಲಿಸಿಕೊಂಡು ಆಗಿನ ಮಾನ್ವಿ ಸಿಪಿಐ ಚಂದ್ರಶೇಖರ ತನಿಖೆ ಪೂರೈಸಿ ನ್ಯಾಯಾಲಯದಲ್ಲಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಸಾಕ್ಷಿ ಪುರಾವೆಗಳನ್ನು ಪರಿಶೀಲಿಸಿದ ಎರ