ನಗರದ ಮುಲ್ತಾನಿ ಓಣಿ ಮನೆಯೊಂದರ ಪ್ರಾಂಗಣದಲ್ಲಿ ಸೋಮವಾರ ರಾತ್ರಿ 10:30ರ ಅಸುಪಾಸು ಮೊಸುಳೆ ಮರಿ ಪತ್ತೆಯಾಗಿದೆ. ಮುಲ್ತಾನಿ ಓಣಿಯ ನಸಿರ್ ಮಹ್ಮದ್ ಅವರು ತಮ್ಮ ನಿತ್ಯದ ಕಾಯಕ ಮುಗಿಸಿಕೊಂಡು ಮನೆ ಪ್ರಾಂಗಣದಲ್ಲಿ ಬೈಕ್ ಬೆಳಕಿಗೆ ಮೊಸುಳೆ ಮರಿ ಪತ್ತೆಯಾಗಿದೆ. ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಧಿಕಾರಿಗಳು ಮೊಸುಳೆಯನ್ನು ಸುರಕ್ಷಿತವಾಗಿ ತೆಗೆದುಕೊಂಡು ಹೋದರು ಎಂದು ನಸಿರ್ ಮಹ್ಮದ್ ವಿವರಿಸಿದರು.