ಯಾದಗಿರಿ ಜಿಲ್ಲೆಯ ಸುರಪುರ ನಗರದಾದ್ಯಂತ ಶನಿವಾರ ತಡರಾತ್ರಿ ವರೆಗೆ 11ನೇ ದಿನದ ಹತ್ತಕ್ಕೂ ಹೆಚ್ಚು ಗಣೇಶನ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮ ನಡೆಯಿತು. ಗಣೇಶ ವಿಸರ್ಜನೆ ಅಂಗವಾಗಿ ಎಲ್ಲೆಡೆ ಭವ್ಯವಾದ ಮೆರವಣಿಗೆ ನಡೆಸಲಾಗಿದೆ. ಹಿಂದೂ ಮಹಾ ಗಣಪತಿಯೇ ವಿಸರ್ಜನೆ ಕಾರ್ಯಕ್ರಮದಲ್ಲಿ ಪೌರಾಣಿಕ ಪಾತ್ರಗಳಾದ ಹನುಮಂತ ಹಾಗೂ ಈಶ್ವರನ ವೇಷ ಧರಿಸಿರುವ ಪಾತ್ರಗಳು ಮೆರವಣಿಗೆಯ ಜನರ ಗಮನ ಸೆಳೆಯಿತು. ರಂಗಂಪೇಟೆ ಎಲ್ಲಿ ನಡೆದ ಗಣೇಶನ ಮೆರವಣಿಗೆಯಲ್ಲಿ ಡಿಜೆ ಸದ್ದಿಗೆ ನೂರಾರು ಸಂಖ್ಯೆಯ ಗಣೇಶನ ಭಕ್ತರು ಕುಣಿದು ಕುಪ್ಪಳಿಸಿದರು. ತಡರಾತ್ರಿ ವರೆಗೆ ನಡೆದ ಮೆರವಣಿಗೆಯಲ್ಲಿ ಬಂದೋಬಸ್ ಒದಗಿಸಿದ್ದ ಪೊಲೀಸರು ಹರಸಾಹಸ ಪಡುವಂತಾಯಿತು.