ಬೆಂಗಳೂರು ಹೈದರಾಬಾದ್ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ರೈತನ ಟ್ರ್ಯಾಕ್ಟರ್ ಗೆ ಗುದ್ಧಿ ಆಂಧ್ರ ಎಂ ಎಲ್ ಎ ಎಸ್ಕೇಪ್ ಆಗಿರೋ ಘಟನೆ ನಡೆದಿದೆ. ದೇವನಹಳ್ಳಿ ತಾಲೂಕಿನ ಅವತಿ ಬಳಿಯ ಹೆದ್ದಾರಿ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದಿದೆ. ಆಂಧ್ರದ ಕಲ್ಯಾಣದುರ್ಗ ಎಂಎಲ್ಎ ಅಮಲಿನೇನಿ ರಿಂದ ಅಪಘಾತ ಸಂಭವಿಸಿದೆ. ಚಿಕ್ಕಬಳ್ಳಾಪುರ ಮೂಲದ ದಿಬ್ಬುರಳ್ಳಿಯ ಲವ ಎಂಬಾತ ಅಪಘಾತ ಕ್ಕಿಡಾದ ರೈತ. ಹೊಸದಾಗಿ ಟ್ರಾಕ್ಟರ್ ತೆಗೆದುಕೊಂಡು ಮನೆ ಕಡೆ ಹೋಗುತ್ತಿದ್ದ ರೈತ. ಅಪಘಾತದಲ್ಲಿ ರೈತ ಲವ ಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತ ಮಾಡಿ ಕಂಡು ಕಾಣದಂತೆ ಆಂಧ್ರ ಎಮ್ಎಲ್ಎ ಎಸ್ಕೇಪ್ ಆಗಿದ್ದಾನೆ.