ತಾಲೂಕಿನ ಚೆನ್ನೂರ ಗ್ರಾಮದಲ್ಲಿ ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ತೆಗೆದು ಒಳನುಗ್ಗಿರುವ ಕಳ್ಳರು ತಿಜೋರಿಯಲ್ಲಿನ ಸುಮಾರು 1.30 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಮೂಲತಃ ಹೂವಿನಹಡಗಲಿ ತಾಲೂಕು ಕತ್ತೆಬೆನ್ನೂರಿನ ಮಂಜುಳಾ ಹಿರೇಮಠ ಎಂಬುವವರು ಹಾವೇರಿ ತಾಲೂಕಿನ ಚೆನ್ನೂರ ಗ್ರಾಮದಲ್ಲಿ ವಾಸವಿದ್ದಾರೆ. ಇವರಿಗೆ ಸೇರಿದ ಮನೆಯಲ್ಲಿ ಕಳ್ಳರು ತಮ್ಮ ಕೈಚಳಕವನ್ನು ತೋರಿದ್ದಾರೆ. ಮನೆಯ ಬಾಗಿಲು ತೆಗೆದು ಒಳ ಹೊಕ್ಕಿರುವ ಕಳ್ಳರು ಬೆಡ್ ರೂಂನಲ್ಲಿನ ತಿಜೋರಿ ಲಾಕರ್ ತೆಗೆದು ಅದರಲ್ಲಿದ್ದ ಬಂಗಾರದ ಗುಂಡಿನ ಸರ, ಕಿವಿಯ ಹ್ಯಾಂಗಿಂಗ್ಸ್, ಚಿಕ್ಕ ಮಕ್ಕಳ ಉಂಗುರ, ಬೆಳ್ಳಿ ಕಾಲು ಚೈನು ಹೀಗೆ ಒಟ್ಟು 1.30 ಲಕ್ಷ ರೂ. ಕಿಮ್ಮತ್ತಿನ ಸಾಮಾನುಗಳನ್ನು ಕಳ್ಳತನ ಮಾಡಿದ್ದಾರೆ