ಹಳಿಯಾಳ : ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ಶ್ರೀ ಗಣೇಶನ ವಿಸರ್ಜನಾ ಮೆರವಣಿಗೆಗೆ ಡಿಜೆ ಅಳವಡಿಕೆಗೆ ಅವಕಾಶ ಮಾಡಿಕೊಡುವಂತೆ ದಾಂಡೇಲಿಯ ಗಣೇಶ ಮಂಡಳಗಳ ಒಕ್ಕೂಟದಿಂದ ಶಾಸಕ ಆರ್ ವಿ ದೇಶಪಾಂಡೆ ಅವರಿಗೆ ಹಳಿಯಾಳದಲ್ಲಿರುವ ಅವರ ಸ್ವಗೃಹದಲ್ಲಿ ಇಂದು ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮನವಿಯನ್ನು ಮಾಡಲಾಯಿತು. ಡಿಜೆ ಬಳಕೆಗೆ ಈ ಹಿಂದಿನ ವರ್ಷಗಳಂತೆ ಈ ಬಾರಿಯೂ ತಾವು ವಿಶೇಷ ಮುತುವರ್ಜಿ ವಹಿಸಿ ಅವಕಾಶ ಮಾಡಿಕೊಡುವಂತೆ ಆರ್.ವಿ.ದೇಶಪಾಂಡೆಯವರಿಗೆ ಮನವಿಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ದಾಂಡೇಲಿಯ ವಿವಿಧ ಗಣೇಶ ಮಂಡಳಗಳ ಪ್ರಮುಖರು ಉಪಸ್ಥಿತರಿದ್ದರು.