ಹೊಸದಾಗಿ ನಿರ್ಮಾಣವಾಗುತ್ತಿರುವ ಹೊಸಕೆರೆ ನಿರ್ಮಾಣದ ಕಾಮಗಾರಿಯನ್ನ ಶಾಸಕ ಸಿಪಿ ಯೋಗೇಶ್ವರ್ ವೀಕ್ಷಣೆ ಮಾಡಿದರು. ಚನ್ನಪಟ್ಟಣ ತಾಲೂಕಿನ ನಾಯಿದೊಳೆ ಗ್ರಾಮದಲ್ಲಿ ಹೊಸದಾಗಿ ಹೊಸಕೆರೆಯ ನಿರ್ಮಾಣ ಮಾಡಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಬುಧವಾರ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು ಕಾಮಗಾರಿ ವೀಕ್ಷಣೆಯನ್ನು ಮಾಡಿ ಅಧಿಕಾರಿಗಳ ಜೊತೆಗೆ ಮತ್ತು ಗ್ರಾಮಸ್ಥರ ಜೊತೆಗೆ ಮಾತುಕತೆ ನಡೆಸಿದರು. ಕೆರೆ ನಿರ್ಮಾಣವಾದ ನಂತರ ಕೆರೆಗೆ ನೀರು ಬರುವಂಥ ಕಾಲುವೆಗಳ ಮೂಲಗಳನ್ನು ಸರಿ ಮಾಡಬೇಕು ಅಂತ ಹೇಳಿ ತಿಳಿಸಿದರು.