ಕಲಬುರಗಿ : ಸರ್ಕಾರಿ ಶಾಲಾ ಮೇಲ್ಛಾವಣಿ ಕುಸಿದು ಮೂವರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಲ್ಕಾಪಲ್ಲಿ ಗ್ರಾಮದಲ್ಲಿ ಆ22 ರಂದು ಮಧ್ಯಾನ 2.30 ಕ್ಕೆ ಸಂಭವಿಸಿದೆ.. ಶಾಲೆಯಲ್ಲಿ ಕುಳಿತು ಪಾಠ ಕೇಳ್ತಿರೋವಾಗ ಏಕಾಏಕಿ ಮೇಲ್ಛಾವಣಿ ತಲೆ ಮೇಲೆ ಕುಸಿದ ಪರಿಣಾಮ ಎಂಟನೇ ತರಗತಿ ಓದ್ತಿದ್ದ ಕಾವೇರಿ, ಶ್ರೀನಿವಾಸ್, ಅಕ್ಷತಾ ಗಂಭೀರ ಗಾಯಗೊಂಡಿದ್ದಾರೆ.. ಅದೃಷ್ಟವಶಾತ್ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಓರ್ವ ವಿದ್ಯಾರ್ಥಿನಿಯ ತಲೆ ಒಡೆದು ಪರಿಣಾಮ ತೀವ್ರ ರಕ್ತಸ್ರಾವವಾಗಿದೆ.