ಕಲಬುರಗಿ : ಕಲಬುರಗಿ ನಗರದ ವಿವಿಧ ಸರ್ಕಾರಿ ಶಾಲೆಗಳಿಗೆ ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ಸೆಪ್ಟೆಂಬರ್ 2ರಂದು ಮಧ್ಯಾನ 12 ಗಂಟೆಗೆ ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ನಗರದ ಬಾಪೂನಗರ ಬಡಾವಣೆಯ ಕರ್ನಾಟಕ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕರುಣೇಶ್ವರ ನಗರ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿದ್ದಾರೆ. ಇನ್ನೂ ಇದೇ ವೇಳೆ ಬಿಸಿಯೂಟ ಮತ್ತು ದವಸಧಾನ್ಯಗಳನ್ನ ಪರಿಶೀಲನೆ ನಡೆಸಿದ ಬಳಿಕ ಶೌಚಾಲಯ ಮತ್ತು ಸ್ಟೋರ್ ರೂಂಗಳ ಅವ್ಯವಸ್ಥೆ ಕಂಡು ಲೋಕಾಯುಕ್ತ ಎಸ್ಪಿ ಶಾಲಾ ಶಿಕ್ಷಕರಿಗೆ ತರಾಟೆಗೆ ತೆಗೆದುಕೊಂಡರು..