ಕಳೆದ ಮೂರು ದಿನಗಳ ಹಿಂದೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ಪ್ರಮಾಣ ಘೋಷಣೆ ಮಾಡಿದ್ದು ಇದರಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಕರ್ನಾಟಕ ಪ್ರದೇಶ ಬಂಜಾರ ಸಂಘದ ಮುಖಂಡರು ಆರೋಪಿಸಿದರು. ಶುಕ್ರವಾರ ಮಧ್ಯಾಹ್ನ ಯಾದಗಿರಿ ನಗರದ ಪತ್ರಿಕ ಭವನದಲ್ಲಿ ಮಾತನಾಡಿ, ಸರ್ಕಾರ ಬಂಜಾರ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಿ ಶೇಕಡ 7ರಷ್ಟು ಮೀಸಲು ಪ್ರಮಾಣ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಬಂಗಾರು ರಾಠೋಡ, ತಾಂಡಾ ಅಭಿವೃದ್ಧಿ ನಿಗಮ ಜಿ ನಿರ್ದೇಶಕ ಮನೋಹರ್ ಪವರ್ ಸೇರಿ ಅನೇಕರು ಭಾಗವಹಿಸಿದ್ದರು.