ಭದ್ರಾವತಿ ತಾಲ್ಲೂಕಿನ ಬಿಳಿಕಲ್ ಬೆಟ್ಟ ಹುಣಸೆಕಟ್ಟೆ ಗ್ರಾಮದ ರಂಗನಾಥ ಪುರ ಮತ್ತು ಗೌಳಿಗರ ಕ್ಯಾಂಪ್‌ನ ಶ್ರೀ ರಂಗನಾಥ ಸ್ವಾಮಿ ದೇವರ 47ನೇ ವರ್ಷದ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಶಾಸಕ ಬಿ.ಕೆ. ಸಂಗಮೇಶ್ ಪುತ್ರ ಬಿ.ಎಸ್. ಗಣೇಶ್ ಸೇರಿದಂತೆ ಹಲವು ಗಣ್ಯರು, ಮುಖಂಡರು ಹಾಗೂ ಭಕ್ತರು ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಇನ್ನು ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಗಣ್ಯರಿಗೆ ದೇವಸ್ಥಾನದ ಕಮಿಟಿಯಿಂದ ಸನ್ಮಾನಿಸಿ ಗೌರವಿಸಲಾಯಿತು.