ಚಳ್ಳಕೆರೆ:-ತಾಲೂಕಿನ ಗೌರಸಮುದ್ರ ಗ್ರಾಮದ ಸಮೀಪ ಇರುವ ತುಮಲಿನಲ್ಲಿ ಮಂಗಳವಾರ ನಡೆದ ಗೌರಸಮುದ್ರ ಮಾರಮ್ಮನ ಅದ್ದೂರಿ ಜಾತ್ರೆಯ ಮರುದಿನವಾದ ಬುಧವಾರ ಸಂಭ್ರಮದಿಂದ ಸಿಡಿ ಉತ್ಸವ ನೆರವೇರಿಸಲಾಯಿತು. ದೇವಿಯ ಸಿಡಿ ಉತ್ಸವ ಸಮೀಪದ ಕೋನಸಾಗರ ಗ್ರಾಮದ ಒಂದು ಕುಟುಂಬಸ್ಥರು ಮಾತ್ರ ಆಡುವ ಪರಂಪರೆ ಬೆಳೆಸಿಕೊಂಡು ಬಂದಿದ್ದಾರೆ. ಈ ಪದ್ಧತಿಯಂತೆ ಈ ವರ್ಷ ಸುಗ್ರೀವಯ್ಯ ಶಿವಣ್ಣ ಅವರ ಮನೆತನದವರು ಸಿಡಿ ಆಡಿದ್ದಾರೆ.