ಅಮಿತ್ ಪೂಜಾರಿ ನಿರ್ಮಾಣದ ಭೈರಾ ಸಿನಿಮಾದ ಮುಹೂರ್ತ ಗುರುವಾರ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಬಳಿಯ ಪಂಚಮುಖಿ ಗಣಪತಿ ದೇಗುಲದಲ್ಲಿ ಬೆಳಗ್ಗೆ 11ಗಂಟೆ ಸುಮಾರಿಗೆ ನೆರವೇರಿದೆ. ಅಕುಲ್.ಎನ್ ನಿರ್ದೇಶನದ ಈ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ನಟ ನೆನಪಿರಲಿ ಪ್ರೇಮ್ ಹಾಗೂ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಆಗಮಿಸಿ, ಕ್ಲಾಪ್ ಮಾಡಿದರು. ಮಹೇಶ್ ಸಿದ್ದು ನಾಯಕನಾಗಿ ನಟಿಇದ್ದು, ಶ್ವೇತಾ ಸುರೇಂದ್ರ ನಾಯಕಿಯಾಗಿದ್ದಾರೆ. ಇನ್ನುಳಿದಂತೆ ಗೋಪಾಲ್ ದೇಶಪಾಂಡೆ, ರವಿ ಕಾಳೆ, ಸಂಪತ್‌ಕುಮಾರ್, ಕಾಕ್ರೋಚ್ ಸುಧಿ, ಯಶ್‌ಶೆಟ್ಟಿ, ಜಾಕ್ ಜಾಲಿಜಾಲಿ ಪಾತ್ರವರ್ಗದಲ್ಲಿದ್ದಾರೆ.