ಬೆಂಗಳೂರು ಮೂಲದ ವ್ಯಕ್ತಿ ಒಬ್ಬ ವ್ಯಾಪಾರದಲ್ಲಿ ನಷ್ಟ ಹಾಗೂ ಪೋಷಕರ ಆರೋಗ್ಯದ ಸಮಸ್ಯೆಯಿಂದಾಗಿ ಲಕ್ಷಗಟ್ಟಲೆ ಸಾಲ ಮಾಡಿಕೊಂಡಿದ್ದ ಸಾಲ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಸುಮಾರು 20 ದಿನಗಳ ಹಿಂದೆ ಮನೆ ಬಿಟ್ಟು ಹೊರಗಡೆ ಬಸ್ ಸ್ಟ್ಯಾಂಡ್,ರೈಲ್ವೆ ಸ್ಟೇಷನ್ ಬೇರೆಬೇರೆ ಸ್ಥಳಗಳಲ್ಲಿ ವಾಸ್ತವ ಮಾಡಿದ ಸಾಗರ ತಾಲೂಕಿನ ಜೋಗ್ ಫಾಲ್ಸ್ ನಲ್ಲಿ ಇರುವಂತಹ ಅಪಾಯಕಾರಿ ಸ್ಥಳಗಳ ಬಗ್ಗೆ ಅಲ್ಲಿನ ಆಟೋ ಚಾಲಕರಲ್ಲಿ ವಿಚಾರಿಸಿದ್ದಾನೆ. ವಿಷಯ ತಿಳಿದಂತಹ ಕಾರ್ಗಲ್ ಠಾಣೆಯ ಪಿಎಸ್ಐ ನಾಗರಾಜ್ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ, ಆತನಿಗೆ ಧೈರ್ಯ ತುಂಬಿ ಮನವೊಲಿಸಿ ಪೋಷಕರಿಗೆ ಫೋನ್ ಮೂಲಕ ಸಂಪರ್ಕಿಸಿ ವಾಪಸ್ ಬೆಂಗಳೂರಿಗೆ ಕಳಿಸಿದ್ದಾರೆ. ಗುರುವಾರ ಪ್ರಕಟಣೆಯ ಮೂಲಕ ಮಾಹಿತಿ ಲಭ್ಯ.