ಸೆಪ್ಟೆಂಬರ್ ೧೨ ರಂದು ಧಾರವಾಡಕ್ಕೆ ಬಸವ ಸಂಸ್ಕೃತಿ ಅಭಿಯಾನದ ರಥಯಾತ್ರೆ ಆಗಮಿಸಲಿದೆ ಎಂದು ಧಾರವಾಡ ಮುರಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮಿಜಿ ತಿಳಿಸಿದರು. ನಗರದ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ವಿಶ್ವಗುರು ಬಸವಣ್ಣ ಕೈಗೊಂಡ ಧಾರ್ಮಿಕ ಸುಧಾರಣೆ ಹಾಗೂ ವಚನ ಸಾಹಿತ್ಯದ ಜಾಗೃತಿ ಮೂಡಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ. ವಿವಿಧ ಸಮಾಜದ ಮುಖಂಡರು ಜಾತಿ, ಮತ, ಪಂಥ ಎಂಬ ಭೇದವಿಲ್ಲದೆ ರಥಯಾತ್ರೆ ಸ್ವಾಗತಿಸಲಿದ್ದಾರೆ ಎಂದರು.