ಶಿವಮೊಗ್ಗ ವಿಮಾನ ನಿಲ್ದಾಣ ರಾಜ್ಯ ಸರ್ಕಾರಕ್ಕೆ ನಿರ್ವಹಣೆಗೆ ನೀಡಿ ತಪ್ಪು ಮಾಡಿದೆ ಎಂದು ಸಂಸದ ರಾಘವೇಂದ್ರ ಹೇಳಿಕೆ ವಿಚಾರಕ್ಕೆ ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇವನ ಒಬ್ಬೊಂದು ವಿಮಾನ ಹಾರಿಲ್ಲ ಅಂತ ದೇಶದ ಕಾನೂನು ಸುವ್ಯವಸ್ಥೆ ಬದಲಾಗಬೇಕು? ಯಾಕೆ ಇದನ್ನ ಅದಾನಿಗೆ ನೀಡಲು ಕೇಂದ್ರ ಸರ್ಕಾರಕ್ಕೆ ಕೊಡಬೇಕಿತ್ತಾ? ಅವರು ಮಾಡಿದ ಎಷ್ಟು ಏರ್ಪೋಟ್್ರ ಗಳಿಂದ ಹಾರಿದ ವಿಮಾನಗಳು ಎಲ್ಲೆಲ್ಲಿ ಲ್ಯಾಂಡ್ ಆಗಿದೆಯಂತೆ? ಬೆವರು ಸುರಿಸಿ ಟ್ಯಾಕ್ಸ್ ಸಂಗ್ರಹಿಸುವುದು ಕರ್ನಾಟಕ ರಾಜ್ಯದವರ.ಏರ್ಪೋಟ್್ರ ಕಟ್ಟಿದ್ದು ರಾಜ್ಯ ಸರ್ಕಾರದ ಹಣದಿಂದ. ಆದರೆ ಈಗ ಏರ್ಪೋಟ್‌್ರ ಕೇಂದ್ರ ಸರ್ಕಾರಕ್ಕೆ ನೀಡಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.