ಬಾಗಲಕೋಟೆ ಜಿಲ್ಲೆಯ ಮುರನಾಳ ಪು.ಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಾಗೂ ವಿಜಯದಶಮಿ ಉತ್ಸವ ನಿಮಿತ್ಯ ಸ್ವಯಂ ಸೇವಕರಿಂದ ಆಕರ್ಷಕ ಪಥ ಸಂಚಲನ ಜರುಗಿತು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿದ ಪಥಸಂಚನಕ್ಕೆ ಗ್ರಾಮಸ್ಥರು ಸಿಳ್ಳೆ ಚಪ್ಪಾಳೆ ಹೊಡೆದು ಪ್ರೊತ್ಸಾಹಿಸಿದರು.ಮನೆಗಳ ಮುಂದೆ ರಂಗವಲ್ಲಿ ಬಿಡಿಸಿ ಸ್ವಯಂ ಸೇವಕರಿಗೆ ಅದ್ದೂರಿ ಸ್ವಾಗತ ಕೋರಿದರು.ಗ್ರಾಮದ ಪಟಾಣಿಗಳು ದೇಶ ಭಕ್ತರ ,ಸ್ವಾತಂತ್ರ್ಯ ಹೋರಾಟಗಾರರ,ಅನೇಕ ಜನ ಮಹನೀಯರ ವೇಷಭೂಷಣ ತೊಟ್ಟು ಪಥಸಂಚಲನಕ್ಕೆ ಮತ್ತಷ್ಟು ಮೆರಗು ತಂದರು.