ಜೋಯಿಡಾ; ಕಾಳಿ ಹುಲಿ ಯೋಜನೆ ವ್ಯಾಪ್ತಿಯಲ್ಲಿ ವಾಸಿಸುವ ಮೂಲ ನಿವಾಸಿಗಳಿಗೆ ರಕ್ಷಣೆ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ಸ್ಥಳೀಯರಿಗೆ ಕಾಡು ಪ್ರಾಣಿಗಳಿಂದ ಭದ್ರತೆ ನೀಡಬೇಕು ಮತ್ತು ಇಲಾಖೆಯಲ್ಲಿ ನಡೆದಿದೆ ಎನ್ನಲಾದ 152 ಕೋಟಿ ಅವ್ಯವಹಾರದ ತನಿಖೆ ಹಾಗೂ ವಿವಿಧ ಬೇಡಿಕೆ ಆಗ್ರಹಿಸಿ ಅಕ್ಟೋಬರ್ 8 ರಂದು ಕುಂಬಾರವಾಡಾ ಸಹಾಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಉಗ್ರ ಪ್ರತಿಭಟನೆ ಮಾಡುವುದಾಗಿ ಜಿಲ್ಲಾ ಕುಣಬಿ ಸಮಾಜ ಮುಂದಾಳತ್ವದಲ್ಲಿ ಸ್ಥಳೀಯ ವಿವಿಧ ಸಮಾಜದ ಮುಖಂಡರು ಜೋಯಿಡಾ ತಾಲ್ಲೂಕು ಆಡಳಿತ ಸೌಧದಲ್ಲಿ ಸೋಮವಾರ ಸಂಜೆ 4:00 ಗಂಟೆ ಸುಮಾರಿಗೆ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.