ಗದಗ ನಗರದಲ್ಲಿ ಅಲೆಮಾರಿ ಸಮುದಾಯದಿಂದ ಭಾರಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ರಾಣಿ ಚೆನ್ನಮ್ಮ ಸರ್ಕಲ್ ಮಾರ್ಗವಾಗಿ ಮುಳಗುಂದ ನಾಕಾ ತಲುಪುವ ವಾಹನಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಬನ್ನಿ ಕಟ್ಟಿಯಿಂದ ಡಂಬಳ ನಾಕಾ ಮಾರ್ಗವಾಗಿ ವಾಹನಗಳು ಸಂಚರಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಸ್ಥದಲ್ಲಿಯೇ ಓರ್ವ ಟ್ರಾಫಿಕ್ ಪೊಲೀಸ್ ಹಾಗೂ ಇಬ್ಬರು ಹೊಮ್ ಗಾರ್ಡ್ ಸಿಬ್ಬಂದಿ ಟ್ರಾಫಿಕ್ ಜಾಮ್ ಆಗದಂತೆ ಸ್ಥಳದಲ್ಲಿ ಕಾರ್ಯ ನಿರ್ವಹಿಸಿದರು.