ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಅನೇಕ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿವೆ. ಅದರಲ್ಲಿಯೂ ಮಹಿಳೆಯರು ಬಸ್ ನಮ್ಮದೇ ಅಂತ ಭಾವಿಸುತ್ತಿದ್ದಾರೆ. ಇದರಿಂದ ಅನಾಹುತ ಕೂಡ ಆಗುತ್ತಿವೆ. ಹೌದು.. ಗದಗ ನಗರದ ವರವಿ ಚಿಕ್ಕ ಮಕ್ಕಳ ಆಸ್ಪತ್ರೆ ಬಳಿ ಮಹಿಳೆಯೊಬ್ಬಳು ಚಲಿಸುತ್ತಿದ್ದ ಬಸ್ ನಿಂದ ಇಳಿಯಲು ಹೋಗಿ ಜಾರಿ ಬಿದ್ದಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.