ರೈತರ ಪಹಣಿ ಮತ್ತು ಎಂ.ಆರ್ ದಾಖಲೆಗಳ ಮೇಲೆ ರಾಜ್ಯ ಸರ್ಕಾರ ಶೇಕಡ 60ರಷ್ಟು ಶುಲ್ಕ ಹೆಚ್ಚಿಸಿ ರೈತ ಸಮುದಾಯದ ಮೇಲೆ ಬರೆ ಎಳೆಯುತ್ತಿದೆ, ಹಾಗೂ ರೈತ ಸಂಬಂಧಿ ದಾಖಲೆಗಳ ಮೇಲು ರಾಜ್ಯ ಸರ್ಕಾರ ಅಧಿಕ ಶುಲ್ಕ ವಿಧಿಸುವ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಮೂಡಿಗೆರೆ ಪಟ್ಟಣದಲ್ಲಿ ಹಲವು ರೈತ ಸಂಘಟನೆಗಳು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಭಾನುವಾರ ರಜೆಯಾದರೂ ಕೂಡ ತಾಲೂಕು ಕಚೇರಿ ಎದುರು ಜಮಾಯಿಸಿದ ಹಲವು ರೈತರು ಮದ್ಯಾಹ್ನ ಎರಡು ಗಂಟೆ ಸುಮಾರಿಗೆ ಪ್ರತಿಭಟನೆ ನಡೆಸಿದರು. ಮಲೆನಾಡಿನಲ್ಲಿ ಅಡಿಕೆ, ಕಾಫಿ ತೆರದಂತೆ ಕಾಳು ಮೆಣಸು ಅಧಿಕಾ ಮಳೆಯಿಂದಾಗಿ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ ಆದರೂ ಸಂಬಂಧಿಸಿದ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ