ತಾಲೂಕಿನ ಗುರುಗುಂಟ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಂದ ಲಂಚ ಪಡೆದಿದ್ದ ಕೃಷಿ ಸಹಾಯಕನನ್ನ ಕೆಲಸದಿಂದ ಅಮಾನತು ಮಾಡಲಾಗಿದೆ ಎಂದು ಲಿಂಗಸಗೂರು ಕೃಷಿ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಅದಲ್ಲದೆ ರೈತರಿಂದ ಪಡೆಯುವ ವೇಳೆ ಕೃಷಿ ಅಧಿಕಾರಿಗಳು ಸ್ಥಳದಲ್ಲಿ ಇರದಿದ್ದರಿಂದ ಹೆಚ್ಚುವರಿ ವೇತನ ಕಡಿತಗೊಳಿಸಿದೆ. ಆಗಸ್ಟ್ 13 ರಂದು ಗುರುಗುಂಟ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಕೃಷಿ ಪೈಪ್ ವಿತರಣೆ ವೇಳೆ ಲಂಚ ವಸೂಲಿ ಮಾಡಿದ್ದರು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ಸಹಾಯಕ ಕೃಷಿ ಅಧಿಕಾರಿಗಳಿಗೆ ಆ.25 ರಂದು ದೂರು ಸಲ್ಲಿಸಿದ್ದರು. ಆ ದೂರನ್ನು ಆಧರಿಸಿ ಸ್ಥಳಕ್ಕೆ ಭೇಟಿ ನೀಡದಾಗ ಸಾರ್ವಜನಿಕರು ಲಂಚ ತೆಗೆದು ಕೊಳ್ಳುತ್ತಿರುವುದನ್ನು ಖಚಿತಪಡಿಸಿದ ನಂತರ ಕೃಷಿ ಸಹಾಯಕನ ಕೆಲಸದಿಂದ ತೆರ