ಸಾಲುಮರದ ತಿಮ್ಮಕ್ಕನವರ ಮನಸ್ಸಿಗೆ ನೋವಾಗಿದ್ದಾರೆ ಜಿಲ್ಲಾಡಳಿತ ಕ್ಷಮೆಯಾಚಿಸುತ್ತದೆ ಎಂದು ಜಿಲ್ಲಾಧಿಕಾರಿ ಲತಾಕುಕುಮಾರಿ ತಿಳಿಸಿದರು.ತಾಲ್ಲೂಕು ಕಚೇರಿ ಆವರಣದಲ್ಲಿ ಗಿಡನೆಟ್ಟು ಮಾತನಾಡಿದ ಅವರು, 'ನಾನು ಮೊದಲ ಬಾರಿ ಈ ತಾಲ್ಲೂಕು ಕಚೇರಿಗೆ ಬಂದಾಗ ಈ ಜಾಗದಲ್ಲಿ ತುಂಬಾ ಪಾರ್ಥೇನಿಯಂ ಗಿಡಗಳು ಬೆಳೆದಿದ್ದವು.ಹಾವುಗಳು ಇದ್ದವು. ಅದನ್ನು ನೋಡಿ, ಜಾಗವನ್ನು ಸ್ವಚ್ಛಗೊಳಿಸಿ, ಸಾರ್ವಜನಿಕರ ಬಳಕೆಗೆ ಅನುಕೂಲವಾಗುವಂತೆ ಮಾಡಲು ನಾನು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಅವರಿಗೆ ತಿಳಿಸಿದ್ದೆ. ಆ ನಿಟ್ಟಿನಲ್ಲಿ ಅವರು ಸ್ವಚ್ಛ ಮಾಡಿಸಿದ್ದಾರೆ. ಜನರಿಗೆ ವಾಕಿಂಗ್ ಮಾಡಲು, ಕಚೇರಿಗೆ ಬರುವವರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ' ಎಂದು ಸ್ಪಷ್ಟನೆ ನೀಡಿದರು.