ನಗರದಲ್ಲಿ 11 ನೇ ದಿನದ ಗಣೇಶ ವಿಸರ್ಜನೆ ಕಾರ್ಯಕ್ರಮ ಅದ್ದೂರಿಯಾಗಿ, ಸಂಭ್ರಮ, ಸಡಗರದಿಂದ ನಡೆದಿದೆ. ಈ ವೇಳೆ ಬಸವೇಶ್ವರ ನಗರದ ಶಹಪೂರಪೇಟೆಯ ಯುವಕರು ಡಿಜೆ ಬದಲಾಗಿ ಸಾಂಪ್ರದಾಯಕ ಡ್ರಮ್ ಸೆಟ್ ತರಿಸಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಯುವಕರ ಜೊತೆ ಮಹಿಳೆಯರು ಹಾಗೂ ಚಿಕ್ಕ ಮಕ್ಕಳು ಸ್ಟೆಪ್ಸ್ ಹಾಕಿ ಸಂತಸ ಪಟ್ಟಿದ್ದಾರೆ. ಗಣೇಶ ವಿಸರ್ಜನೆ ಮೇರವಣಿಗೆ ವೇಳೆ ಬೀಗಿ ಪೊಲೀಸ್ ಬಂದೋಬಸ್ತ್ ಕೂಡ ಆಯೋಜನೆ ಮಾಡಲಾಗಿತ್ತು.