ನಿರಂತರ ಮಳೆ ಹಿನ್ನೆಲೆ.ಮನೆಯ ತಗಡಿನ ಮೇಲ್ಛಾವಣಿ & ಗೋಡೆ ಕುಸಿದು ಬಾಲಕ ಸಾವು.ಇನ್ನೊಬ್ಬ ಬಾಲಕನಿಗೆ ಗಾಯ, ಆಸ್ಪತ್ರೆಗೆ ದಾಖಲು.ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರದಲ್ಲಿ ಘಟನೆ. ದರ್ಶನ್ ಲಾತೂರ (11 ) ಮೃತ ಬಾಲಕ.ಇನ್ನೊಬ್ಬ ಬಾಲಕ ಶ್ರೀಶೈಲಗೆ ಗಾಯ, ಆಸ್ಪತ್ರೆಗೆ ದಾಖಲು. ಬೆಳಗಿನ ಜಾವ 5 ಗಂಟೆಗೆ ನಡೆದ ಅವಘಡ.ನಾಗಪ್ಪ ಲಾತೂರ್ ಎಂಬುವವರ ಮಗ ದರ್ಶನ್.ಮನೆಯಲ್ಲಿ ಕೋಣೆಯೊಂದರಲ್ಲಿ ತಾಯಿಯೊಂದಿಗೆ ಮಲಗಿದ್ದ ಮಕ್ಕಳು.ಬೆಳಿಗ್ಗೆ ತಾಯಿ ಎದ್ದು ಬೇರೆ ಕೊಠಡಿಗೆ ಬರುತ್ತಲೇ ಬಿದ್ದ ಮನೆ ಗೋಡೆ.ಸ್ಥಳಕ್ಕೆ ಕಂದಾಯ ಇಲಾಖೆ & ಪೋಲಿಸ ಇಲಾಖೆ ಅಧಿಕಾರಿಗಳು ಭೇಟಿ, ಪರಿಶೀಲನೆ. ಮಹಾಲಿಂಗಪೂರದ ಅಂಬೇಡ್ಕರ್ ವೃತ್ತದ ಬಳಿ ಇರುವ ಲಾತೂರ ಅವರ ಮನೆ.