ಇಸ್ತ್ರಿ ಪೆಟ್ಟಿ ಅಂಗಡಿಗೆ ಬೆಂಕಿ : ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿ ಶ್ರೀನಿವಾಸಪುರ ತಾಲೂಕಿನ ನೆರ್ನ ಹಳ್ಳಿಯಲ್ಲಿ ನಟರಾಜ್ ಎಂಬುವರು ತಾಲೂಕಿನ ಸೋಮಯಾಜಲ ಹಳ್ಳಿಯಲ್ಲಿ ಪೆಟ್ಟಿಗೆ ಅಂಗಡಿಯಲ್ಲಿ ಇಸ್ತ್ರಿ ಹಾಗೂ ಕಬ್ಬಿಣದ ವ್ಯಾಪಾರ ಮಾಡಿ ಜೀವನ ಸಾಗಿಸುತಿದ್ದು ಕಿಡಿಗೇಡಿಗಳು ಬೆಂಕಿಹಚ್ಚಿದ್ದು ಸುಮಾರು ಒಂದು ಲಕ್ಷ ಐವತ್ತು ಸಾವಿರ ರೂಪಾಯಿ ಬೆಲೆಬಾಳುವ ವಸ್ತುಗಳು ನಾಶವಾಗಿದೆ ಇನ್ನು ಈ ಸಂಬಂಧ ಶನಿವಾರ ಸಂಜೆ 5 ಗಂಟೆಯಲ್ಲಿ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.