ನಗರದ ಶಿವಶಕ್ತಿ ಪ್ಯಾಲೇಸ್ ನಲ್ಲಿ ಆ.30 ರಂದು ಮಧ್ಯಾಹ್ನ 3ಕ್ಕೆ ಜೈ ಮಾನವ ಸಮಾವೇಶ ಹಾಗೂ ಕಲ್ಯಾಣ ಸಂಘದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಮೇಕ್ ವೇಲ್ ಫೇರ್ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕ ಮೌಲಾನ ಮುಸ್ತಫ ರಝಾ ನಈಮಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಲುವಾಗಿ ಜೈ ಮಾನವ ಸಮಾವೇಶ ಹಾಗೂ ಕಲ್ಯಾಣ ಸಂಘದ ಲೋರ್ಕಾಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.