ಅಧಿಕೃತ ಮಾಹಿತಿಯ ಮೇರೆಗೆ ಅಳಿವಿನಂಚಿನಲ್ಲಿರುವ ಅತಿ ಅಪರೂಪದ ವನ್ಯಜೀವಿ ಹಾರು ಬೆಕ್ಕಿನ ಅಕ್ರಮ ಬೇಟೆಯಾಡಿದ್ದ ಆರೋಪದ ಮೇಲೆ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಶುಕ್ರವಾರ ಹೊಸನಗರ ತಾಲೂಕಿನ ನಗರ ವಲಯ ವ್ಯಾಪ್ತಿಯ ಹುಂಚ ಹೋಬಳಿಯ ಬಾಳೆಗೊಪ್ಪ ಗ್ರಾಮದಲ್ಲಿ ನಡೆದಿದೆ. ಸರ್ವೇ ನಂಬರ್ 17ರ ಖುಷಿ ಜಮೀನಿನಲ್ಲಿ ಹಾರೋ ಬೇಕನ್ನ ಭೇಟಿ ಮಾಡಿದ ಆರೋಪದ ಮೇಲೆ ಸತೀಶ್ ಬಿನ್ ನಾಯ್ಕ್ ಎಂಬುವರನ್ನು ಮಾನು ಸಹಿತ ನಗರ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿ ವನ್ಯಜೀವಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿ,ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.