ಹುತಾತ್ಮರಾದ ವೀರ ಯೋಧರಿಗೆ ನಗರದಲ್ಲಿ ಶ್ರದ್ಧಾಂಜಲಿ ಕೋಲಾರ ಜಯನಗರದ ಡಾಕ್ಟರ್ ಬಿಆರ್ ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿ ಯೋಧರ ಸ್ಮಾರಕದ ಬಳಿ ಬುಧವಾರ ಸಂಜೆ 6:30 ಸಮಯದಲ್ಲಿ ದೇಶಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ಅಜಿತ್ ಸಿಂಗ್,ಪ್ರೀತಮ್ ಸಿಂಗ್, ರಾಮ್, ರಾಜೇಶ್ ಯಾದವ್,ಶೀತಲ್ ಕುಮಾರ್,ರಾಕೇಶ್ ಕುಮಾರ್ ಹಾಗೂ ರಾಜೇಂದ್ರ ಸಿಂಗ್ ರವರ ಭಾವಚಿತಕ್ಕೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಮಾಡಿ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರದ ಮುರಳಿ ಗೌಡ ಮಾತನಾಡಿ, ಹಗಲಿರುಳು ದೇಶ ಕಾಯುವ ವೀರ ಯೋಧರನ್ನು ಸ್ಮರಿಸು