ಸಾರಿಗೆ ಬಸ್ಸಿನಲ್ಲಿ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಕಳ್ಳತನವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಜರುಗಿದೆ. ಜಮಖಂಡಿಯಿಂದ ಜುಂಝರವಾಡ ಗ್ರಾಮಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಇದ್ದ ಮಧುರಖಂಡಿ ಗ್ರಾಮದ ಮಂಗಳಾ ಕಾಂಬಳೆ(26) ಎನ್ನುವ ಮಹಿಳೆಯ ಒಂದು ತೊಲೆ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.ಕೂಡಲೇ ಮಹಿಳೆಯ ಗಮನಕ್ಕೆ ಬಂದ ತಕ್ಷಣ ಜಮಖಂಡಿ ನಗರದ ಶಿವಾಜಿ ಸರ್ಕಲನಲ್ಲಿ ಬಸ್ಸಿನಿಂದ ಇಳಿದು ಪೊಲೀಸ್ ಠಾಣೆಗೆ ಹೋಗಿದ್ದಾರೆ.ಜೊತೆಗೆ ವಿಷಯವನ್ನ ತನ್ನ ಮನೆಯವರಿಗೂ ತಿಳಿಸಿದ್ದಾರೆ.ನಂತರ ಸಂಬಂಧಿಕರು ಬಸ್ ತಡೆಹಿಡಿದಿದ್ದಾರೆ.