ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅಪಾಯದ ಮಟ್ಟವನ್ನ ತಲುಪುವ ಸಾಧ್ಯತೆಗಳಿರುವ ಕಾರಣ ತಹಶೀಲ್ದಾರ್ ಅಂಜು ಅವರು ಗುರುವಾರ ರಾತ್ರಿ 8ಕ್ಕೆ ಮಾಣಿಕನಗರ ಸೇತುವೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಇನ್ನು ಮಳೆ ಪ್ರಮಾಣ ಹೆಚ್ಚಾದರೆ ಸೇತುವೆ ಜಲಾವೃತ ಆಗುವ ಸಾಧ್ಯತೆ ಇರುವ ಕಾರಣ ಸೇತುವೆಗೆ ಹೊಂದಿಕೊಂಡ ಜನ, ಜಾನುವಾರು ಹೊರಗೆ ಬರದಂತೆ ನೋಡಿಕೊಳ್ಳಲು ಸೂಚಿಸಿದರು.