ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ವಿರುದ್ಧ ಪ್ರತಿಭಟನೆ. ಜಿ.ಟಿ ದೇವೇಗೌಡ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನಾಕಾರರ ಆಕ್ರೋಶ. ಜಿ.ಟಿ ದೇವೇಗೌಡ ದಲಿತ ವಿರೋಧಿ ಎಂದು ಘೋಷಣೆ. ಮೈಸೂರು ತಾಲೂಕು, ಜಯಪುರ ಹೋಬಳಿ ಸಿಂಧುವಳ್ಳಿ ಗ್ರಾಮದಲ್ಲಿ ಪ್ರತಿಭಟನೆ. ವಿಧಾನಸೌಧದ ಕಲಾಪದಲ್ಲಿ ದಲಿತ ವಿರೋಧಿ ಹಾಗೂ ಮೀಸಲಾತಿ ವಿರೋಧಿ ಹೇಳಿಕೆ ನೀಡಿದ್ದಾರೆಂದು ಜಿ ಟಿ ದೇವೇಗೌಡರ ವಿರುದ್ಧ ದಲಿತ ಮುಖಂಡರೆಲ್ಲಾ ಸೇರಿ ಪ್ರತಿಭಟನೆ ನಡೆಸಿದ್ದಾರೆ.